ಉತ್ತರಾಯಣ ಪರ್ವಕಾಲದಲ್ಲಿ ಬರುವ ಪ್ರಥಮ ಸಂಕ್ರಮಣ ಮಕರ ಸಂಕ್ರಮಣ. ಈ ಸಂಕ್ರಮಣವು ಬಹಳ ಮಹತ್ವದ್ದಾಗಿದ್ದು, ಮಕರ ಮಾಸದಲ್ಲಿ ಮಾಡುವ ದೇವತಾ ಸೇವಾ ಕಾರ್ಯಗಳಿಗೆ ವಿಶೇಷ ಫಲವಿದೆ.
ಮಕರ ಸಂಕ್ರಮಣದಂದು ವಿಷ್ಣುವಿನ ಸೇವೆಗೆ ವಿಶೇಷ ಮಹತ್ವವಿರುವುದರಿಂದ ಆ ದಿನವನ್ನು ವಿಶೇಷ ಶೃದ್ಧಾ ಭಕ್ತಿಯಿಂದ ಶ್ರೀ ಕ್ಷೇತ್ರದಲ್ಲಿ ಆಚರಿಸಲಾಗುತ್ತಿದೆ. ಆ ದಿನ, ದಿನಾಂಕ 14-01-2020, ಮಂಗಳವಾರದಂದು ಗ್ರಹಣ ದೋಷ, ಪ್ರಾಕೃತಿಕ ಏರು ಪೇರು, ದೇಶದಲ್ಲ್ಲಿನ ಕ್ಷೆಭೆ, ಪ್ರಜೆಗಳ ಮಾನಸಿಕ, ಶಾರೀರಿಕ ಆರೋಗ್ಯ ಸಮಸ್ಯೆ ಇತ್ಯಾದಿ ದುರಿತಗಳ ನಿವಾರಣೆಗಾಗಿ ಹಾಗೂ ಲೋಕ ಕಲ್ಯಾಣಾರ್ಥವಾಗಿ ಶ್ರೀ ಕ್ಷೇತ್ರದಲ್ಲಿ ಸಾಮೂಹಿಕ ಶ್ರೀ ವಿಷ್ಣು ಸಹಸ್ರನಾಮ ಪಠಣ ಸೇವೆ ನಡೆಯಲಿದೆ. ಈ ಸೇವೆಯಲ್ಲಿ ಭಾಗವಹಿಸಲು ಎಲ್ಲಾ ಭಕ್ತರಿಗೂ ಅವಕಾಶವಿದೆ. ತಂಡವಾಗಿ ಬಂದು ಸೇವೆ ಸಲ್ಲಿಸಲು ಅವಕಾಶವಿದೆ.

ಆ ದಿನ ಪ್ರಾತಃ ಕಾಲ ಶ್ರೀದೇವರಿಗೆ ಎಳ್ಳೆಣ್ಣೆ ಅಭಿಷೇಕ, ಪಂಚಾಮೃತಾಭಿಷೇಕ ನಡೆಯುತ್ತದೆ. ಬೆಳಗ್ಗೆ ಗಣಪತಿ ಹವನ, 8 ಗಂಟೆಗೆ ಮಹಾಪೂಜೆ ನಡೆಯಲಿದೆ. 9.15 ಕ್ಕೆ ಸಾಮೂಹಿಕ ಪ್ರಾರ್ಥನೆ, 9.30 ರಿಂದ ಪಠಣ ಪ್ರಾರಂಭವಾಗಿ 12 ರ ವರೆಗೆ 8 ಆವರ್ತನಗಳಲ್ಲಿ ನಡೆಯಲಿದೆ. 12.30 ಕ್ಕೆ ವಿಶೇಷ ಮಹಾಪೂಜೆ, (ವಿಶೇಷ ಕಾರ್ತಿಕ ಪೂಜೆ – ದೀಪಾಲಂಕಾರ ಪೂಜೆ) ಪ್ರಸಾದ ವಿತರಣೆ, ಬಳಿಕ ಪ್ರಸಾದ ಭೊಜನ ನಡೆಯಲಿದೆ. ಆ ದಿನ ಗ್ರಹಚಾರ ದೋಷ ಪರಿಹಾರಕ್ಕಾಗಿ ಎಳ್ಳೆಣ್ಣೆ ಸಮರ್ಪಣೆ, ಸಹಸ್ರನಾಮಾರ್ಚನೆ, ವಿಶೇಷ ಕಾರ್ತಿಕ ಪೂಜೆ ಸೇವೆಗೆ ವಿಶೇಷ ಮಹತ್ವವಿದೆ. ಭಗವದ್ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ವಿನಂತಿಸಲಾಗಿದೆ.