ಶ್ರೀಕೃಷ್ಣ ಜನ್ಮಾಷ್ಟಮಿ, ಲಕ್ಷತುಳಸೀ ಅರ್ಚನೆ

ಮಂಗಳೂರಿನ ಶಕ್ತಿನಗರದಲ್ಲಿರುವ ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ದಿನಾಂಕ 4-9-2026 ಶುಕ್ರವಾರದಂದು ಶ್ರೀಕೃಷ್ಣ ಜನ್ಮಾಷ್ಟಮಿ ಹಾಗೂ ದಿನಾಂಕ 5-6-2026 ಶನಿವಾರದಂದು ಶ್ರೀದೇವರಿಗೆ ಲಕ್ಷ ತುಳಸೀ ಅರ್ಚನೆ ತಂತ್ರಿವರ್ಯ ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಅಸ್ರರ ಮಾರ್ಗದರ್ಶನದೊಂದಿಗೆ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.

ಶ್ರೀಕೃಷ್ಣ ಜನ್ಮಾಷ್ಟಮಿಯಂದು ಪ್ರಾತಃಕಾಲ ಶ್ರೀದೇವರಿಗೆ ಪಂಚಾಮೃತ ಅಭಿಷೇಕ, ಗಣಪತಿ ಹವನ, ಬೆಳಗ್ಗಿನ ಮಹಾಪೂಜೆ, ಭಜನಾ ನಾಮಸಂಕೀರ್ತನೆ, ಮಧ್ಯಾಹ್ನ ಮಹಾಪೂಜೆ, ಸಾಯಂಕಾಲ 5 ರಿಂದ ರಾತ್ರಿ 8 ರ ತನಕ ಶ್ರೀ ಸುಧಾಕರ್ ಕೋಟೆ ಕುಂಜತ್ತಾಯ ಕಾಸರಗೋಡು ಇವರ ತಂಡದಿಂದ ಭಕ್ತ ಸುಧಾಮ ಎಂಬ ಹರಿಕಥಾ ಸತ್ಸಂಗ ನಡೆಯಲಿದೆ. ರಾತ್ರಿ 8 ರಿಂದ ರಾತ್ರಿ 11.30 ರ ತನಕ ಭಜನಾ ನಾಮ ಸಂಕೀರ್ತನೆ ನಡೆದು ನಂತರ ರಾತ್ರಿ 11.30 ಕ್ಕೆ ಸರಿಯಾಗಿ ಶ್ರೀ ಗೋಪಾಲಕೃಷ್ಣ ದೇವರಿಗೆ ವಿಶೇಷ ಅಲಂಕಾರ ಪೂಜೆ, ಮಹಾಮಂಗಳಾರತಿ, ಅರ್ಘ್ಯಪ್ರಧಾನ ಪ್ರಸಾದ ವಿತರಣೆ, ಉಪಹಾರ ಸೇವೆ ನಡೆಯಲಿದೆ. 5-6-2026 ಶನಿವಾರ, ಪ್ರಾತಃಕಾಲ ಶ್ರೀ ದೇವರಿಗೆ ಪಂಚಾಮೃತಾಭಿಷೇಕ, ಶ್ರೀ ಗಣಪತಿ ಹವನ, ಬೆಳಗ್ಗಿನ ಮಹಾಪೂಜೆ, ಬೆಳಿಗ್ಗೆ 8.30 ರಿಂದ ಲಕ್ಷ ತುಳಸೀ ಅರ್ಚನೆ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ ಅನ್ನ ಸಂತರ್ಪಣೆ ನಡೆಯಲಿದೆ. ಲಕ್ಷತುಳಸೀ ಅರ್ಚನೆಗೆ ಅಧಿಕವಾದ ತುಳಸಿಯ ಅವಶ್ಯಕತೆಯಿದೆ. ಅಗತ್ಯವಿರುವ ತುಳಸಿಯನ್ನು ದಿನಾಂಕ 4-9-2026 ರ ಮದ್ಯಾಹ್ನದ ಒಳಗಡೆ ದೇವಳಕ್ಕೆ ಅರ್ಪಿಸಬಹುದಾಗಿದೆ ಈ ಎಲ್ಲಾ ಕಾರ್ಯಕ್ರಮಕ್ಕೆ ಭಕ್ತಾದಿಗಳು ಬಂದು ಭಾಗವಹಿಸಿ ಶ್ರೀ ಗೋಪಾಲಕೃಷ್ಣ ದೇವರ ಅನುಗ್ರಹಕ್ಕೆ ಪಾತ್ರರಾಗಬೇಕಾಗಿ ವಿನಂತಿ.