ಕ್ರಿಮಿ ನಾಶಕ ಸೂಕ್ತ ಹವನ (ಘರ್ಮ ಪ್ರಾಯಶ್ಚಿತ್ತ ಮಂತ್ರ ಹವನ)

Date(s) : 03/08/2020
Time : 8:30 am - 1:00 pm

Location
Sri Gopalakrishna Temple


ದಿನಾಂಕ 3-8-2020, ಸೋಮವಾರ, ಪೌರ್ಣಮಿಯಂದು ಲೋಕ ಕಲ್ಯಾಣಾರ್ಥವಾಗಿ ಸಾಮೂಹಿಕ ಆಯುಷ್ಯ ಸೂಕ್ತ ಸಹಿತ ಘರ್ಮ ಪ್ರಾಯಶ್ಚಿತ್ತ ಸೂಕ್ತ (ಕ್ರಿಮಿನಾಶಕ ಸೂಕ್ತ) ಹವನ ನಡೆಸುವುದಾಗಿ ನಿಶ್ಚಯಿಸಲಾಗಿದೆ. ಇದು ಯಜುರ್ವೇದದ ಆರಣ್ಯಕದಲ್ಲಿ ಚತುರ್ಥ ಪ್ರಶ್ನದಲ್ಲಿ ಬರುವ ಘರ್ಮ ಪ್ರಾಯಶ್ಚಿತ್ತ ಮಂತ್ರ ಪೂರ್ವಕವಾದ ಒಂದು ವಿಶೇಷ ಹವನವಾಗಿದೆ.

ಸಮಸ್ತ ಸಮಾಜದ ಹಾಗೂ ಪ್ರತಿಯೊಬ್ಬರ ವೈಯಕ್ತಿಕ ಆರೋಗ್ಯ ರಕ್ಷಣೆಯ ಹಿತ ದೃಷ್ಟಿಯಿಂದ ನಡೆಸಲಾಗುವ ಈ ವಿಶೇಷ ಹವನದಲ್ಲಿ ಸರಕಾರಿ ನಿಯಮ ಪಾಲನೆ ಮಾಡಿ ಸೀಮಿತ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಿ, ಲೋಕದ ಸಮಸ್ತ ಜನರ ಆರೋಗ್ಯಕ್ಕಾಗಿ ಪ್ರಾರ್ಥಿಸಿ, ಶ್ರೀದೇವರ ಕೃಪೆಗೆ ಪಾತ್ರರಾಗಬೇಕಾಗಿ ವಿನಂತಿ.