ಆಗಸ್ಟ್‌ 11 ರಂದು ಶ್ರೀಕೃಷ್ಣ ಜನ್ಮಾಷ್ಠಮಿ

Date(s) : 11/08/2020 - 12/08/2020
Time : 11:30 pm - 1:00 am

Location
Sri Gopalakrishna Temple


ಮಂಗಳೂರಿನ ಶಕ್ತಿನಗರದಲ್ಲಿರುವ ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಸಂಪ್ರದಾಯದಂತೆ ತಂತ್ರಿವರ್ಯ ವೇದಮೂರ್ತಿ ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಅಸ್ರ ಇವರ ಮಾರ್ಗದರ್ಶನದಲ್ಲಿ ದಿನಾಂಕ 11-8-2020 ನೇ ಮಂಗಳವಾರ ಶ್ರೀಕೃಷ್ಣ ಜನ್ಮಾಷ್ಟಮಿ ಹಾಗೂ ದಿನಾಂಕ 12-8-2020 ನೇ ಬುಧವಾರ ಲೋಕ ಕಲ್ಯಾಣಾರ್ಥವಾಗಿ ಶ್ರೀದೇವರಿಗೆ ಲಕ್ಷ ತುಳಸೀ ಅರ್ಚನೆ ನಡೆಯಲಿದೆ.

ದಿನಾಂಕ 11-8-2020 ನೇ ಮಂಗಳವಾರ ಶ್ರೀಕೃಷ್ಣ ಜನ್ಮಾಷ್ಟಮಿಯಂದು ಪ್ರಾತಃಕಾಲ ಶ್ರೀದೇವರಿಗೆ ಪಂಚಾಮೃತ ಅಭಿಷೇಕ, ಗಣಪತಿ ಹವನ, ಮಧ್ಯಾಹ್ನ ವಿಶೇಷ ಅಲಂಕಾರ ಪೂಜೆ ನಡೆಯಲಿದೆ.

ರಾತ್ರಿ 11-30 ಕ್ಕೆ ಶ್ರೀದೇವರಿಗೆ ವಿಶೇಷ ಅಲಂಕಾರಪೂಜೆ ಹಾಗೂ ಅರ್ಘ್ಯಪ್ರದಾನ ನಡೆಯಲಿದೆ. ಸಾಮಾಜಿಕ ಅಂತರವನ್ನು ಪಾಲಿಸಿಕೊಂಡು ಶ್ರೀ ಕೃಷ್ಣನಿಗೆ ಅರ್ಘ್ಯ ಪ್ರದಾನ ಮಾಡಲು ಭಕ್ತರಿಗೆ ಅವಕಾಶವಿದೆ.

ದಿನಾಂಕ 12-8-2020 ನೇ ಬುಧವಾರದಂದು ಬೆಳಗ್ಗೆ 8.30 ರಿಂದ ಲಕ್ಷತುಳಸೀ ಅರ್ಚನೆ ಪ್ರಾರಂಭವಾಗಿ ಮಧ್ಯಾಹ್ನ 12.30 ಕ್ಕೆ ಮಹಾಪೂಜೆ ನಡೆಯಲಿದೆ. ಲಕ್ಷಾರ್ಚನೆಗಾಗಿ ಭಕ್ತರು ತುಳಸಿಯನ್ನು ದಿನಾಂಕ 11 ರಂದೇ ಶ್ರೀಕ್ಷೇತ್ರಕ್ಕೆ ತಲಪಿಸಲು ವಿನಂತಿಸಲಾಗಿದೆ.