ಮಂಗಳೂರಿನ ಶಕ್ತಿನಗರದ ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಅಷ್ಟಬಂಧ ಬ್ರಹ್ಮಕಲಶೋತ್ಸವವು ಇದೇ ಬರುವ, 2020, ಎಪ್ರಿಲ್ 21 ರಿಂದ 26 ರ ವರೆಗೆ ನಡೆಯಲಿದ್ದು ಈಗಾಗಲೇ ಬ್ರಹ್ಮಕಲಶೋತ್ಸವ ಸಮಿತಿಯ ರಚನೆಯಾಗಿ ಬಿರುಸಿನಿಂದ ಚಟುವಟಿಕೆಗಳು ನಡೆಯುತ್ತಿವೆ. ದಿನಾಂಕ 28 ರಂದು ಶ್ರೀ ದೇವರೆದುರು ಪ್ರಾರ್ಥಿಸಿ ಬ್ರಹ್ಮಕಲಶೋತ್ಸವ ಕಾರ್ಯಕ್ರಮಗಳ ವಿವರಗಳನ್ನು ತಿಳಿಸುವ ವಿಜ್ಞಾಪನಾ ಪತ್ರದ ಲೋಕಾರ್ಪಣೆ ನಡೆದಿದೆ. ಬಳಿಕ ಬ್ರಹ್ಮಕಲಶೋತ್ಸವ ಸಮಿತಿಯ ಕಾರ್ಯಾಲಯದ ಉದ್ಘಾಟನೆಯನ್ನು ನೆರವೇರಿಸಲಾಯಿತು.



ಸ್ಥಳಿಯ ಕಾರ್ಪೊರೇಟರ್ ಆದ ವನಿತಾ ಪ್ರಸಾದ್ ದೀಪ ಬೆಳಗಿಸುವುದರ ಮೂಲಕ ಕಾರ್ಯಾಲಯಕ್ಕೆ ಚಾಲನೆ ನೀಡಿದರು. ಸಮಿತಿಯ ಅಧ್ಯಕ್ಷರಾದ ಮೋನಪ್ಪ ಭಂಡಾರಿಯವರು ಪ್ರಥಮ ದೇಣಿಗೆ ನೀಡಿ ಕೋಶಾಧಿಕಾರಿಗಳಾದ ಕೃಷ್ಣ ಪ್ರಸಾದ ಮಡ್ತಿಲ ಅವರಿಂದ ರಶೀದಿ ಪಡೆದುಕೊಳ್ಳುವುದರ ಮೂಲಕ ಶುಭಾರಂಭ ಮಾಡಿದರು. ಕೃಷ್ಣ ಪ್ರಸಾದ ಮಡ್ತಿಲ, ಪ್ರಧಾನ ಕಾರ್ಯದರ್ಶಿಗಳಾದ ಹೆಚ್. ಕೆ. ಪುರುಷೋತ್ತಮ, ವಕೀಲರಾದ ಸುಮನಾ ಶರಣ್ ಮುಂತಾದವರು ಈ ಸಂದರ್ಭದಲ್ಲಿ ದೇಣಿಗೆ ನೀಡಿ ಕಾರ್ಯಕ್ರಮದ ಯಶಸ್ಸಿಗಾಗಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ನಡೆಯಬೇಕಾದ ತುರ್ತು ಕಾರ್ಯಗಳ ಬಗೆ ಚರ್ಚಿಸಲಾಯಿತು. ಆಡಳಿತ ಮೊಕ್ತೇಸರರಾದ ಡಾ. ಕೆ. ಸಿ. ನಾಕ್ ಅವರು ಈಗ ನಡಯುತ್ತಿರುವ ಜೀರ್ಣೋದ್ಧಾರ ಕಾರ್ಯಗಳ ಬಗ್ಗೆ ವಿವರ ನೀಡಿದರು.
ಸ್ವಾಗತ ಸಮಿತಿ ಪ್ರಧಾನ ಕಾರ್ಯದರ್ಶಿ ಕೆ. ರಮೇಶ್, ವೇದಿಕೆ ಸಮಿತಿಯ ಸಂಚಾಲಕರಾದ ಪುರುಷೋತ್ತಮ ಭಂಡಾರಿ, ಪ್ರೊ. ಚಂದ್ರಶೇಖರ್, ವಿದ್ಯಾ ಕಾಮತ್, ಪೂರ್ಣೇಶ್, ಶೇಖರ್, ಕಾರ್ಯಾಲಯದ ಸಹ ಸಂಚಾಲಕರಾದ ಪರಮೇಶ್ವರ ಭಟ್, ಸತ್ಯನಾರಾಯಣ ಭಟ್ರಕೋಡಿ, ವಿಷ್ಣು ಮೂರ್ತಿ, ರಾಜಗೋಪಾಲ ಭಟ್ ಮುಂತಾದವರು ಉಪಸ್ಥಿತರಿದ್ದು.
ಆಡಳಿತಾಧಿಕಾರಿ ಕೃಷ್ಣ ಕುಮಾರ್ ಸ್ವಾಗತಿಸದರು. ಹೆಚ್. ಕೆ. ಪುರುಷೋತ್ತಮ ಧನ್ಯವಾದವಿತ್ತರು.