ಶ್ರಾವಣ ಮಾಸ, ಕೃಷ್ಣ ಪಕ್ಷ ಅಷ್ಟಮಿ, ದಿನಾಂಕ 11-8-2020, ಮಂಗಳವಾರದಂದು ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಶ್ರೀಕೃಷ್ಣ ಜನ್ಮಾಷ್ಠಮಿಯನ್ನು ಸಂಪ್ರದಾಯದಂತೆ ಆಚರಿಸಲು ನಿಶ್ಚಯಿಸಲಾಗಿದ್ದು ಆ ದಿನ ಶ್ರೀದೇವರಿಗೆ ಪ್ರಾತಃಕಾಲದಿಂದಲೇ ವಿಶೇಷ ಅಭಿಷೇಕ, ಪೂಜೆಗಳು, ರಾತ್ರಿ 11.30 ಕ್ಕೆ ಶ್ರೀದೇವರಿಗೆ ವಿಶೇಷ ಪೂಜೆ, ಅರ್ಘ್ಯಪ್ರದಾನ ನಡೆಯಲಿದ್ದು, ಮರುದಿನ ದಿನಾಂಕ 12 ರಂದು ಲಕ್ಷತುಳಸೀ ಅರ್ಚನೆ ನಡೆಯಲಿದೆ. ಸರಕಾರದ ನಿಯಮ, ಸಾಮಾಜಿಕ ಅಂತರ ಪಾಲಿಸಿಕೊಂಡು ಸೀಮಿತ ಸಂಖ್ಯೆಯಲ್ಲಿ ಭಗವದ್ಭಕ್ತರು ಭಾಗವಹಿಸಲು ಅವಕಾಶವಿದೆ. ಭಗವದ್ಭಕ್ತರು ದಿನಾಂಕ 11 ರಂದೇ ಶ್ರೀದೇವರಿಗೆ ಹೆಚ್ಚಿನ ಸಂಖ್ಯೆಯಲ್ಲಿ ತುಳಸಿಯನ್ನು ತಲಪಿಸುವಂತೆ ಬಿನ್ನವಿಸಲಾಗಿದೆ.
