ಏಕಾಹ ಭಜನೋತ್ಸವ ಉದ್ಘಾಟನೆ

28-04-2025 ರಂದು ಬೆಳಿಗ್ಗೆ 6.13 ಕ್ಕೆ ಸರಿಯಾಗಿ ಏಕಾಹ ಭಜನೋತ್ಸವವನ್ನು ವಿಶ್ವ ಹಿಂದೂ ಪರಿಷತ್‌ನ ಮಂಗಳೂರು ಇದರ ಅಧ್ಯಕ್ಷರಾದ ಶ್ರೀ ಹೆಚ್. ಕೆ. ಪುರುಷೋತ್ತಮರವರು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು. ಒಟ್ಟು 22 ಭಜನಾ ತಂಡಗಳು ದಿನದ 24 ಗಂಟೆ ಭಜನಾ ಸೇವೆಯನ್ನು ನಡೆಸಿಕೊಡಲಿದ್ದಾರೆ. ಈ ಸಂದರ್ಭದಲ್ಲಿ ಶಕ್ತಿ ವಿದ್ಯಾ ಸಂಸ್ಥೆಯ ಪ್ರಧಾನ ಸಲಹೆಗಾರರಾದ ರಮೇಶ್ ಕೆ, ಕ್ಷೇತ್ರದ ಭಜನಾ ಸಂಚಾಲಕರಾದ ಶ್ರೀ ಉದಯ್ ಕುಮಾರ್ ಶ್ರೀ ಆನಂದ್, ಶ್ರೀ ಪದ್ಮನಾಭ, ಶ್ರೀ ವೀರಪ್ಪ ಹಾಗೂ ಪ್ರಧಾನ ಅರ್ಚಕರಾದ ವೆಂಕಟ್ರಮಣ ಭಟ್ ಉಪಸ್ಥಿತರಿದ್ದರು.

ದಿನಾಂಕ 29-4-2025 ಸಂಜೆ 5.00 ಗಂಟೆಗೆ ಸರಿಯಾಗಿ ಶ್ರೀ ವಿಷ್ಣು ಸಹಸ್ರನಾಮ ಪಾರಾಯಣದ ತಯಾರಿಯು ನಡೆದಿದ್ದು ಇದರಲ್ಲಿ 108 ಶ್ರೀ ವಿಷ್ಣು ಸಹಸ್ರನಾಮ ಪಾರಾಯಣ ಮಾಡುವ ಭಕ್ತಾದಿಗಳು ಭಾಗವಹಿಸಲಿದ್ದಾರೆ. ಲೋಕಕಲ್ಯಾಣಾರ್ಥವಾಗಿ ಹಾಗೂ ದೇಶದ ಜನರಿಗೆ ಸುಖ, ಶಾಂತಿ, ನೆಮ್ಮದಿ ಲಭಿಸುವಂತೆ ಶ್ರೀ ವಿಷ್ಣುವಿನಲ್ಲಿ ಪ್ರಾರ್ಥಿಸುವ ಉದ್ದೇಶದೊಂದಿಗೆ ಈ ಪಾರಾಯಣವನ್ನು ಹಮ್ಮಿಕೊಳ್ಳಲಾಗಿದೆ ಎಂದು ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಡಾ. ಕೆ.ಸಿ. ನಾೖಕ್‌ ಅವರು ತಿಳಿಸಿದ್ದಾರೆ.