ಇದೇ ಬರುವ ತಾರೀಕು 26-8-2024 ದಂದು ಕ್ರೋಧಿ ನಾಮ ಸಂವತ್ಸರದ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಶ್ರೀ ಕ್ಷೇತ್ರದಲ್ಲಿ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿದೆ. ಸಂಪ್ರದಾಯದಂತೆ 26-8-2024 ರ ಪ್ರಾತಃ ಕಾಲದಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನೆರವೇರಲಿದೆ. ಪೂರ್ವಾಹ್ನ ಗಣಪತಿ ಹೋಮ, ಮಹಾ ಪೂಜೆ ನಂತರ ವಿವಿಧ ಭಜನಾ ತಂಡಗಳಿಂದ ನಾಮ ಸಂಕೀರ್ತನೆ, ಮದ್ಯಾಹ್ನ ಮಹಾಪೂಜೆ ಜರುಗಲಿದೆ.
ಅಂದು ಸಂಜೆ 5 ರಿಂದ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಅಧ್ಯಯನ ಕೇಂದ್ರದ ಕಲಾವಿದರಿಂದ ಶ್ರೀ ರಾಕೇಶ್ ರೈ ಅಡ್ಕ ಇವರ ನಿರ್ದೇಶನ ಹಾಗೂ ಶ್ರೀಮತಿ ರಮ್ಯ ಆಚಾರ್ಯ ಇವರ ಸಂಯೋಜನೆಯಲ್ಲಿ ಶ್ರೀ ಕೃಷ್ಣ ಲೀಲಾಮೃತ ಎಂಬ ಯಕ್ಷಗಾನ ಪ್ರಸಂಗದ ಪ್ರದರ್ಶನ ನಡೆಯಲಿದೆ. ರಾತ್ರಿ 11.30 ಕ್ಕೆ ವಿಶೇಷ ಅಲಂಕಾರ ಪೂಜೆ, ಮಹಾಮಂಗಳಾರತಿ ಹಾಗೂ ಶ್ರೀ ಗೋಪಾಲಕೃಷ್ಣ ದೇವರಿಗೆ ಅರ್ಘ್ಯಪ್ರಧಾನ ನಂತರ ಪ್ರಸಾದ ವಿತರಣೆ ನಡೆಯಲಿದೆ.
ತಾರೀಕು 27-8-2024 ರಂದು ಶ್ರೀ ದೇವರಿಗೆ ಲಕ್ಷ ತುಳಸಿ ಅರ್ಚನೆ ನಡೆಯಲಿದೆ ಪ್ರಾತಃಕಾಲ 8.30 ರಿಂದ ಅರ್ಚನೆ ಆರಂಭಗೊಳ್ಳಲಿದೆ ಮಧ್ಯಾಹ್ನ 12.30 ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ ಜರುಗಿ ಅನ್ನ ಪ್ರಸಾದ ವಿತರಣೆ ನಡೆಯಲಿದೆ. 27 ರಂದು ನಡೆಯಲಿರುವ ಲಕ್ಷ ತುಳಸೀ ಅರ್ಚನೆಗೆ 26 ರಂದು ತುಳಸೀ ಪತ್ರೆಗಳನ್ನು ಸಮರ್ಪಿಸಬಹುದಾಗಿದೆ.
ಈ ಎಲ್ಲಾ ಕಾರ್ಯಕ್ರಮಗಳಿಗೆ ಭಕ್ತಾದಿಗಳು ಬಂದು ತಮ್ಮ ತನು-ಮನ-ಧನದ ಸಹಕಾರವನ್ನು ನೀಡಿ ಶ್ರೀ ಗೋಪಾಲಕೃಷ್ಣ ದೇವರ ಸಂಪೂರ್ಣ ಅನುಗ್ರಹಕ್ಕೆ ಪಾತ್ರರಾಗಬೇಕಾಗಿ ಆಡಳಿತ ಮಂಡಳಿ, ಅರ್ಚಕರು ಮತ್ತು ಸಿಬ್ಬಂದಿ ವರ್ಗ ಹಾಗೂ ಊರ ಹತ್ತು ಸಮಸ್ತರು ವಿನಂತಿಸಿದ್ದಾರೆ.
ashtami invitation 2024