ಶಕ್ತಿನಗರದ ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಏಪ್ರಿಲ್ 30 ರಂದು ನಡೆಯುವ ವಾರ್ಷಿಕೋತ್ಸವ ನಿಮಿತ್ತ ಇಂದು ಬೆಳಗ್ಗೆ 6.12 ಕ್ಕೆ ಸೂರ್ಯೋದಯದ ಸಂದರ್ಭದಲ್ಲಿ ಏಕಾಹ ಭಜನೆಗೆ ಮರೋಳಿ ಸೂರ್ಯನಾರಾಯಣ ದೇವಸ್ಥಾನದ ಅಭಿವೃದ್ಧಿ ಸಮಿತಿಯ ಗೌರವಾಧ್ಯಕ್ಷರಾದ ಶ್ರೀ ಬಾಲಕೃಷ್ಣ ಕೊಟ್ಟಾರಿ ದೀಪ ಪ್ರಜ್ವಲನೆಯ ಮೂಲಕ ಚಾಲನೆ ನೀಡಿದರು.
ಇದೇ ಸಂದರ್ಭದಲ್ಲಿ ಶಕ್ತಿ ಶಿಕ್ಷಣ ಸಂಸ್ಥೆಯ ಪ್ರಧಾನ ಸಲಹೆಗಾರ ರಮೇಶ್ ಕೆ., ಆಡಳಿತಾಧಿಕಾರಿ ಆದೀಶ್ ಕೆ. ಉಪಸ್ಥಿತರಿದ್ದರು. ನಂತರ ಗೋಪಾಲಕೃಷ್ಣ ಭಕ್ತವೃಂದದಿಂದ ಭಜನೆಯು ಪ್ರಾರಂಭವಾಗಿ 24 ಗಂಟೆಗಳ ನಿರಂತರ ಭಜನೆ ಕಾರ್ಯಕ್ರಮ ನಡೆಯಲಿದೆ. ಏಪ್ರಿಲ್ 30 ರಂದು ಪೂಜ್ಯ ತಂತ್ರಿಗಳಾದ ವಿಷ್ಣು ಅಸ್ತ್ರ ಅವರ ನೇತೃತ್ವದಲ್ಲಿ ಚಂಡಿಕಾಹವನ, ವಿಶೇಷ ಸೀಯಾಳಾಭಿಷೇಕ, ಪಂಚಾಮೃತಾಭಿಷೇಕ ಮೂಲಕ ಏಕಾಹ ಭಜನೆ ಸಮಾಪ್ತಿಗೊಳ್ಳಲಿದೆ.