ಮಂಗಳೂರಿನ ಶಕ್ತಿನಗರದಲ್ಲಿರುವ ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ದಿನಾಂಕ 30-4-2023, ಆದಿತ್ಯವಾರದಂದು ತಂತ್ರಿವರ್ಯ ವೇದಮೂರ್ತಿ ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಅಸ್ರ ಇವರ ನೇತೃತ್ವದಲ್ಲಿ ಪ್ರತಿಷ್ಠಾ ವಾರ್ಷಿಕ ಮಹೋತ್ಸವವು ಲೋಕಕಲ್ಯಾಣಾರ್ಥವಾಗಿ ಏಕಾಹ ಭಜನೆ, ವಿಶೇಷ ಸೀಯಾಳಾಭಿಷೇಕ, ಮಹಾಗಣಪತಿ ಹವನ, ಚಂಡಿಕಾ ಹವನ, ರಂಗ ಪೂಜೆಯೊಂದಿಗೆ ಜರಗಲಿರುವುದು.
ತಾರೀಕು 29-4-2023 ನೇ ಶನಿವಾರದಂದು ಪ್ರಾತಃ ಕಾಲ 6.12 ಮರೋಳಿ ಶ್ರೀಸೂರ್ಯನಾರಾಯಣ ದೇವಸ್ಥಾನ ಅಭಿವೃದ್ಧಿ ಸಮಿತಿಯ ಗೌರವಾಧ್ಯಕ್ಷರು, ಶ್ರೀ ಬಾಲಕೃಷ್ಣ ಕೊಟ್ಟಾರಿಯವರು ದೀಪ ಬೆಳಗಿಸುವುದರ ಮೂಲಕ ಏಕಾಹ ಭಜನೆಯನ್ನು ಪ್ರಾರಂಭಿಸಲಿದ್ದಾರೆ ಜಿಲ್ಲೆಯ ವಿವಿಧ ಭಜನಾತಂಡಗಳು ಸೇವೆ ಸಲ್ಲಿಸಲಿದ್ದಾರೆ.
ತಾರೀಕು 30-4-2023 ರ ಪ್ರಾತಃಕಾಲ 6.12 ಕ್ಕೆ ಭಜನಾ ಮಂಗಲವಾಗಲಿದ್ದು ನಂತರ ವಿಶೇಷ ಸೀಯಾಳಾಭಿಷೇಕ, ಗಣಪತಿ ಹವನ, ನವಕಾಭಿಷೇಕ ನಡೆಯಲಿದೆ. ಮದ್ಯಾಹ್ನ 11.30 ಕ್ಕೆ ಚಂಡಿಕಾ ಹೋಮದ ಪೂರ್ಣಾಹುತಿಯ ನಂತರ ಮದ್ಯಾಹ್ನದ ಮಹಾಪೂಜೆ ನಡೆದು ಪ್ರಸಾದ ಭೋಜನ ನಡೆಯಲಿದೆ. ಸಂಜೆ 4 ರಿಂದ ಆನಂದ ಭಜನೆ, 5.30 ಕ್ಕೆ ದ.ಕ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪ್ರಪ್ರಥಮ ಮಕ್ಕಳ ಮೇಳ, ಸರಯೂ ಬಾಲಯಕ್ಷ ವೃಂದ(ರಿ) ಇವರಿಂದ ಯಕ್ಷಗಾನ ಪ್ರಸಂಗ ಶ್ರೀ ಕೃಷ್ಣ ಕಾರುಣ್ಯ ಯಕ್ಷಗುರುಗಳಾದ ವರ್ಕಾಡಿ ಶ್ರೀ ರವಿ ಅಲೆವೂರಾಯರ ನಿರ್ದೇಶನದಲ್ಲಿ ಪಸ್ತುತಗೊಳ್ಳಲಿದೆ. ರಾತ್ರಿ 8 ಕ್ಕೆ ಮಹಾಪೂಜೆ, ಶ್ರೀ ದೇವರಿಗೆ ರಂಗ ಪೂಜೆ ಜರುಗಿ ಪ್ರಸಾದ ವಿತರಣೆ ನಡೆಯಲಿದೆ.
ಈ ಎಲ್ಲಾ ವಿಚಾರಗಳನ್ನು ತಮ್ಮ ಮಾಧ್ಯಮದಲ್ಲಿ ಪ್ರಕಟಿಸಿ ಹೆಚ್ಚಿನ ಸಂಖ್ಯೆಯ ಭಗವದ್ಭಕ್ತರಿಗೆ ತಿಳಿಯುವಂತೆ ಮಾಡಬೇಕಾಗಿ ಈ ಪುಣ್ಯಕಾರ್ಯದಲ್ಲಿ ಭಾಗವಹಿಸಿ ಶ್ರೀದೇವರ ಪೂರ್ಣಾನುಗ್ರಹಕ್ಕೆ ಪಾತ್ರರಾಗಬೇಕಾಗಿ ವಿನಂತಿ.