ಮಂಗಳೂರು – ಗೀತಾ ಜ್ಞಾನ ಯಜ್ಞದ ಮೂರನೇ ಸ್ನೇಹ ಸಮ್ಮೇಳನ ಜನವರಿ 22 ರಂದು ಮಂಗಳೂರಿನ ಶಕ್ತಿನಗರದ ಶಕ್ತಿ ವಿದ್ಯಾಸಂಸ್ಥೆಯಲ್ಲಿ ಜರುಗಿತು. ಬೆಳಗ್ಗೆ 9 ಗಂಟೆಗೆ ಸರಿಯಾಗಿ ಕಾರ್ಯಕ್ರಮ ಆರಂಭವಾಯಿತು.
ಕಾರ್ಯಕ್ರಮದ ಮೂಲಶಕ್ತಿಯಾದ ಶ್ರೀ ಸುಬ್ರಾಯ ನಂದೋಡಿ ಹಾಗೂ ಶಕ್ತಿ ವಿದ್ಯಾಸಂಸ್ಥೆಯ ಸಂಸ್ಥಾಪಕರಾದ ಡಾ। ಕೆ ಸಿ ನಾಯಕ್ ಕಾರ್ಯಕ್ರಮ ಉದ್ಘಾಟಿಸಿದರು. ಶಕ್ತಿ ವಿದ್ಯಾಸಂಸ್ಥೆಯ ಪ್ರಧಾನ ಸಲಹೆಗಾರ ಶ್ರೀ ರಮೇಶ್ ಕೆ ಪ್ರಾಸ್ತಾವಿಕ ನುಡಿದರು.
ಶ್ರೀ ಗಜಾನನ ಪೈ ಗೀತೆಯ ಮಹತ್ವವನ್ನು ತಿಳಿಸಿದರು. ಮೈತ್ರೇಯೀ ಗುರಕುಲದ ವಿದ್ಯಾರ್ಥಿನಿಯರಿಂದ ಪಾರಂಪರಿಕ ಗುರುಕುಲದ ಪ್ರಾತ್ಯಕ್ಷಿಕೆ ನಡೆಯಿತು.
ಗೀತಾರಸಪ್ರಶ್ನೆ, ಗೀತಾ ಅಕ್ಷರಶ್ಲೋಕೀ, ಒಗಟು, ಗಾದೆ ಮುಂತಾದ ಸ್ಪರ್ಧೆಗಳನ್ನು ಮಕ್ಕಳಿಗಾಗಿ ಆಯೋಜಿಸಲಾಗಿತ್ತು. ಮಕ್ಕಳಿಂದ ಗೀತಾರೂಪಕ ಪ್ರದರ್ಶನ ನಡೆಯಿತು. ಸುಮಾರು 400ಕ್ಕೂ ಹೆಚ್ಚು ಜನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.