ದೀಪಾವಳಿ – ಸಹಸ್ರ ದೀಪೋತ್ಸವ

During Deepavali, Sahasra Deepotsava will be conducted in Shakthinagar Sri Gopalakrisha Temple from 26-10-2019 Saturday to 28-10-2019 Monday.

All the 3 days Pooja, Abhisheka will be there. In the evening cultural programs will be there by various artists and groups. Every day at 8 pm Tulasi Namasankirtana will be there till Utthana Dwadashi (November 9).

All devotes are requested to attended the programs and take blessing of Lord Sri Krishna.

ಮಂಗಳೂರಿನ ಶಕ್ತಿನಗರದ ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ದಿನಾಂಕ 26-10-2019 ಶನಿವಾರದಿಂದ 28-10-2019 ಸೋಮವಾರದವರೆಗೆ ದೀಪಾವಳಿಯ ಸಂದರ್ಭದಲ್ಲಿ ಸಹಸ್ರ ದೀಪೋತ್ಸವವು ನಡೆಯಲಿದೆ.

ತಾ. 26 ರಂದು ನರಕ ಚತುರ್ದಶಿ ದಿವಸ ಪ್ರಾತಃಕಾಲ 5.30 ಕ್ಕೆ ಶ್ರೀದೇವರಿಗೆ ತೈಲಾಭ್ಯಂಜನ, ಎಳ್ಳೆಣ್ಣೆ ಅಭಿಷೇಕ, ಪಂಚಾಮೃತ ಅಭಿಷೇಕ, ತಾ. 27 ರ ಅಮಾವಾಸ್ಯೆಯಂದು ಪ್ರಾತಃಕಾಲ ಪವಮಾನ ಅಭಿಷೇಕ, ಸಾಯಂಕಾಲ ಲಕ್ಷ್ಮೀ ಪೂಜೆ, ತಾ. 28 ರ ಪಾಡ್ಯದಂದು ಪ್ರಾತಃಕಾಲ ಪಂಚಾಮೃತ ಅಭಿಷೇಕ, ಸೀಯಾಳಾಭಿಷೇಕ ನಡೆಯಲಿದೆ.

ಎಲ್ಲಾ ದಿವಸಗಳಲ್ಲೂ ಶ್ರೀದೇವರಿಗೆ ಮಧ್ಯಾಹ್ನ ಹಾಗೂ ರಾತ್ರಿ ವಿಶೇಷ ಅಲಂಕಾರ ಪೂಜೆ ಇರಲಿದೆ.

26 ರಂದು ಸಾಯಂಕಾಲ 5 ರಿಂದ ಶ್ರೀ ಸದ್ಗುರು ಭಜನಾಮಂಡಳಿ, ಪಂಡಿತ್ ಹೈಸ್, ತೊಕ್ಕೊಟ್ಟು ಇವರಿಂದ ಭಜನಾ ಸಂಕೀರ್ತನೆ, 6.30 ಕ್ಕೆ ಗುರು ಅರ್ಜುನ್ ಶೆಟ್ಟಿ ಅವರ ಡ್ರಾಗನ್ ಫಿಸ್ಟ್ ತಂಡದಿಂದ ಆತ್ಮರಕ್ಷಣೆ ಕರಾಟೆ ಪ್ರದರ್ಶನ.

27 ರಂದು ಸಾಯಂಕಾಲ 5 ರಿಂದ ’ನೃತ್ಯ ಸೌರಭ’ ಕಾರ್ಯಕ್ರಮದಲ್ಲಿ ನಾಟ್ಯವಿದುಷಿ ಸುಮಾ ದಾಮೋದರ್, ಮಯೂರಿ ನಾಟ್ಯಾಲಯ ಇದರ ಶಿಷ್ಯ ವೃಂದದಿಂದ ಸಂಗೀತ ನೃತ್ಯ ವೈಭವ, ಭರತನಾಟ್ಯ ಕಾರ್ಯಕ್ರಮ ನಡೆಯಲಿದೆ.

28 ರಂದು ಸಾಯಂಕಾಲ 5 ರಿಂದ ಯಕ್ಷ ಮಂಜುಳಾ ಕದ್ರಿ ಮಹಿಳಾ ತಾಳಮದ್ದಳೆ ಬಳಗದಿಂದ ನರಕಾಸುರ ಮೋಕ್ಷ ಯಕ್ಷಗಾನ ತಾಳಮದ್ದಳೆ ಕಾರ್ಯಕ್ರಮವಿದೆ.

ಈ ಮೂರೂ ದಿವಸಗಳಲ್ಲಿ ಸಾಯಂಕಾಲ 7 ಕ್ಕೆ ಸಹಸ್ರ ದೀಪಾಲಂಕಾರ ಸಹಿತ ದೀಪಾರಾಧನೆ, ದೀಪೋತ್ಸವ ನಡೆಯಲಿದೆ. 28 ರಂದು ಸಾಯಂಕಾಲ 7 ಕ್ಕೆ ಸಾಮೂಹಿಕ ಗೋಪೂಜೆ, ರಾತ್ರಿ 8 ಕ್ಕೆ ಮಹಾಸೇವೆ – ರಂಗಪೂಜೆ, ತುಳಸೀ ಪೂಜೆ, ತುಳಸೀ ನಾಮಸಂಕೀರ್ತನೆ ನಡೆಯಲಿದೆ. ಬಳಿಕ ನವೆಂಬರ್ 9, ಉತ್ಥಾನ ದ್ವಾದಶಿ (ತುಳಸೀ ಪೂಜೆ) ವರೆಗೂ ಪ್ರತಿದಿನ ರಾತ್ರಿ 8 ಕ್ಕೆ ಮಹಾಪೂಜೆಯ ಬಳಿಕ ಶ್ರೀದೇವರಿಗೆ ಪ್ರಿಯವಾದ ತುಳಸೀ ನಾಮಸಂಕೀರ್ತನೆ ನಡೆಯಲಿದೆ. ವಿಶೇಷವಾದ ಈ ಸೇವೆ ಮಾಡಿಸಿಕೊಳ್ಳಲು ಭಕ್ತರಿಗೆ ಅವಕಾಶವಿದೆ.