ತನ್ನ ಆದರ್ಶದಿಂದ ಇಡೀ ಜಗತ್ತಿಗೇ ಭಾರತವು ತಾಯಿಯ ಸ್ಥಾನದಲ್ಲಿ ನಿಲ್ಲುವಂತಾಗಲಿ -ಪಿ. ಎಸ್. ಪ್ರಕಾಶ್
ಶತಮಾನಗಳ, ಸಹಸ್ರಾರು ಮಂದಿಗಳ ಹೋರಾಟದ ಫಲವಾಗಿ ಶ್ರೀರಾಮ ಮಂದಿರದ ಕನಸು ನೆನಸಾಗುವ ಕ್ಷಣ ಇದೀಗ ಬಂದಿದೆ. ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರಕ್ಕೆ ಶಿಲಾನ್ಯಾಸಗೊಂಡು ಬಾರತೀಯರ ಆಸೆ ಆಕಾಂಕ್ಷೆಗಳು ಈಡೇರಿದೆ. ನರೇಂದ್ರ ಮೋದಿಯವರ ನಾಯಕತ್ವದಲ್ಲಿ ಜಗತ್ತಿನ ಒಳಿತಿಗಾಗಿ ಶೀಘ್ರವಾಗಿ ಭವ್ಯವಾದ ಶ್ರೀರಾಮ ಮಂದಿರ ನಿರ್ಮಾಣವಾಗಿ ರಾಮನ ಆದರ್ಶ ಜಗತ್ತಿನಲ್ಲಿ ಎಲ್ಲಾ ಕಡೆ ನೆಲೆಸಲಿ. ರಾಮನ ಆದರ್ಶವನ್ನು ಜಗತ್ತೇ ಪಾಲಿಸುವಂತಾಗಿ, ಇಡೀ ಜಗತ್ತಿಗೇ ಭಾರತವು ತಾಯಿಯಸ್ಥಾದಲ್ಲಿ ನಿಂತು ಜಗತ್ತಿನ ಶಾಂತಿಗೆ ಮುನ್ನುಡಿ ಬರೆಯುವಂತಾಗಲಿ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಾಂತ ಸಹ ಕಾರ್ಯವಾಹರಾದ ಪ್ರಾಕಾಶ್ ಪಿ.ಎಸ್. ನುಡಿದರು. ಅವರು ಮಂಗಳೂರಿನ ಶಕ್ತಿನಗರದ ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಅಯೋಧ್ಯೆಯ ಶ್ರೀರಾಮ ಜನ್ಮಭೂಮಿಯಲ್ಲಿ ಐತಿಹಾಸಿಕವಾಗಿ ಶ್ರೀರಾಮ ಮಂದಿರ ನಿರ್ಮಾಣ ಕಾರ್ಯದ ಶಿಲಾನ್ಯಾಸದ ದಿವಸ ಆ ಕಾರ್ಯಕ್ರಮದ ಯಶಸ್ಸಿಗಾಗಿ ನಡೆಸಿದ ವಿಶೇಷ ಪೂಜಾ ಕಾರ್ಯಕ್ರಮದಲ್ಲಿ ಸಾಮೂಹಿಕ ಪ್ರಾರ್ಥನೆಯ ಸಂದರ್ಭದಲ್ಲಿ ಮಾತನಾಡುತ್ತಿದ್ದರು.
ಮನು ಪ್ರಜಾಪತಿಯಿಂದ ನಿರ್ಮಿತವಾದ ಯುದ್ಧದ ಕಲ್ಪನೆಯೇ ಇರದಿದ್ದ, ಶಾಂತಿ, ಪ್ರೀತಿ, ಸಹಬಾಳ್ವೆಯಿಂದ ಇದ್ದಂತಹ ನಗರ ಅಯೋಧ್ಯೆಯು, ಸಪ್ತ ಮೋಕ್ಷ ದಾಯಕವಾದ ಪುಣ್ಯಸ್ಥಳಗಳಲ್ಲಿ ಪ್ರಥಮವಾದ ನಗರ. ಇಲ್ಲಿ ಶ್ರೀರಾಮ ಮಂದಿರ ನಿರ್ಮಾಣವಾಗುವುದರಿಂದ ಲೋಕದಲ್ಲಿ ಸಮಸ್ತಜನರಿಗೂ ಶಾಂತಿ, ನೆಮ್ಮದಿ ಸೌಭಾಗ್ಯಗಳು ಲಭಿಸಲಿ. ನಿರ್ಮಾಣ ಕಾರ್ಯವೆಲ್ಲವೂ ನಿರ್ವಿಘ್ನವಾಗಿ ನೆರವೇರಲಿ, ಜಗತ್ತಿಗೇ ಕಲ್ಯಾಣವಾಗಲಿ ಎಂದು ಶ್ರೀ ಕ್ಷೇತ್ರದ ಪ್ರಧಾನ ಅರ್ಚಕರಾದ ವೇದಮೂರ್ತಿ ವೆಂಕಟರಮಣ ಭಟ್ಟರು ಪ್ರಾರ್ಥನೆ ನಡೆಸಿಕೊಟ್ಟರು.
ಆ ದಿನ ಬೆಳಗ್ಗೆ ಶ್ರೀ ದೇವರಿಗೆ ಪಂಚಾಮೃತಾಭಿಷೇಕ, ಮಹಾಗಣಪತಿ ಹವನ ಹಾಗೂ ಮಧ್ಯಾಹ್ನ ವಿಶೇಷ ಕಾರ್ತಿಕ ಪೂಜೆ ನಡೆಸುವುದರ ಮೂಲಕ ಅಯೋಧ್ಯೆಯಲ್ಲಿ ನಡೆಯುವ ಶ್ರೀರಾಮ ಮಂದಿರದ ನಿರ್ಮಾಣ ಕಾರ್ಯಕ್ಕೆ ನಿರ್ವಿಘ್ನತೆ, ಕಾರ್ಯಕ್ರಮಕ್ಕೆ ಯಶಸ್ಸು ಹಾಗೂ ಭವ್ಯತೆಗಾಗಿ ತುಪ್ಪದ ದೀಪವನ್ನು ಬೆಳಗಿಸಿ, ಸಾಮೂಹಿಕವಾಗಿ ವಿಶೇಷ ಪ್ರಾರ್ಥನೆಯನ್ನು ನಡೆಸಲಾಯಿತು.
ಶಕ್ತಿನಗರದ ಜಗನ್ನಾಥ ಶೆಣೈ ಮತು ಬಳಗದವರಿಂದ ಭಜನಾ ಕಾರ್ಯಕ್ರಮವು ನಡೆಯಿತು.
ಈ ಸಂದರ್ಭದಲ್ಲಿ ಆಡಳಿತ ಮೊಕ್ತೇಸರರಾದ ಡಾ. ಕೆ. ಸಿ. ನಾೖಕ್, ಮೊಕ್ತೇಸರರಾದ ಶ್ರೀಮತಿ ಸಗುಣಾ ನಾೖಕ್, ಸ್ಥಳೀಯ ಕಾರ್ಪರೇಟರ್‌ಗಳಾದ ವನಿತಾ ಪ್ರಸಾದ್, ಕಿಶೋರ್ ಕೊಟ್ಟಾರಿ, ಜ್ಯೊತಿಷಿ ಸಿ.ವಿ.ಪೊದುವಾಳ್, ಮಂಗಳೂರು ವಿಶ್ವ ವಿದ್ಯಾಲಯದ ಸಿಂಡಿಕೇಟ್ ಸದಸ್ಯ ರವಿಚಂದ್ರ, ಎ.ಬಿ.ವಿ.ಪಿ.ಮಾಜಿ ರಾಜ್ಯಾಧ್ಯಕ್ಷ್ಷರಾದ ಚ.ನ.ಶಂಕರ್ ರಾವ್, ದೇವದಾಸ್, ಸಿ. ಪಿ. ಕಾಮತ್, ಮುರಳೀಧರ ಕಾಮತ್, ಶಕ್ತಿ ವಿದ್ಯಾ ಸಂಸ್ಥಯ ರಮೇಶ್ ಕೆ., ಪ್ರಭಾಕರ್ ಜಿ. ಎಸ್., ಶ್ರೀಮತಿ ವಿದ್ಯಾ ಕಾಮತ್ ಮತ್ತಿತರರು ಉಪಸ್ಥಿತರಿದ್ದರು.