ಆಗಸ್ಟ್‌ 18 ಮತ್ತು 19 ರಂದು ಶ್ರೀಕೃಷ್ಣ ಜನ್ಮಾಷ್ಟಮಿ, ಲಕ್ಷತುಳಸೀ ಅರ್ಚನೆ

ಮಂಗಳೂರಿನ ಶಕ್ತಿನಗರದಲ್ಲಿರುವ ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ದಿನಾಂಕ 18-08-2022 ರಂದು ಶ್ರೀಕೃಷ್ಣ ಜನ್ಮಾಷ್ಟಮಿ ಹಾಗೂ ದಿನಾಂಕ 19-8-2022 ರಂದು ಶ್ರೀದೇವರಿಗೆ ಲಕ್ಷ ತುಳಸೀ ಅರ್ಚನೆ ವಿವಿಧ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.

ಶ್ರೀಕೃಷ್ಣ ಜನ್ಮಾಷ್ಟಮಿಯಂದು ಪ್ರಾತಃಕಾಲ ಶ್ರೀದೇವರಿಗೆ ಪಂಚಾಮೃತ ಅಭಿಷೇಕ, ಗಣಪತಿ ಹವನ, ಮಧ್ಯಾಹ್ನ ವಿಶೇಷ ಅಲಂಕಾರ ಪೂಜೆ, ರಾತ್ರಿ ಶ್ರೀದೇವರಿಗೆ ಮಹಾ ಪೂಜೆ ಹಾಗೂ ಅರ್ಘ್ಯಪ್ರದಾನ ಸೇವೆ ನಡೆಯಲಿದೆ. ಆ ದಿನ ಪ್ರಾತಃಕಾಲದಿಂದ ವಿವಿಧ ಭಜನಾ ತಂಡಗಳಿಂದ ನಾಮ ಸಂಕೀರ್ತನೆ 9.30 ರಿಂದ ಶ್ರೀ ನಾಗಬ್ರಹ್ಮ ಯಕ್ಷಕಲಾ ಸಂಘ, ರಾಜೀವನಗರ,ಶಕ್ತಿನಗರ ಇದರ ಕಲಾವಿದರಿಂದ ’ಶ್ರೀ ಕೃಷ್ಣ ಲೀಲಾ ವರ್ಣವ’ ಎಂಬ ತಾಳಮದ್ದಳೆ ಪ್ರದರ್ಶನಗೊಳ್ಳಲಿದೆ. ಸಂಜೆ 4.30 ರಿಂದ ಶಕ್ತಿ ವಸತಿ ಶಾಲೆ ಮತ್ತು ಪದವಿ ಪೂರ್ವಕಾಲೇಜಿನ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿದೆ. 5 ಕ್ಕೆ ನಾಟ್ಯ ವಿಧುಷಿ ಶ್ರೀಮತಿ ವಿನುತಾ ಲಕ್ಷೀಕಾಂತ್ ಜೋಗಿ ಇವರ ಸಂಗೀತ-ನೃತ್ಯಾರಾಧನಾ ತಂಡದಿಂದ ಭರತನಾಟ್ಯ ಜರುಗಲಿದೆ ೬.೪೯ರಿಂದ ಕುಣಿತ ಭಜನೆ ನೆರವೇರಲಿದೆ. ರಾತ್ರಿ 11.30 ಕ್ಕೆ ಶ್ರೀ ಗೋಪಾಲಕೃಷ್ಣ ದೇವರಿಗೆ ಅರ್ಘ್ಯಪ್ರದಾನ ನೆರವೇರಲಿದೆ. ವಿಶೇಷವಾಗಿ ಭಕ್ತಾದಿಗಳೆಲ್ಲರಿಗೂ ಶ್ರೀಕೃಷ್ಣನಿಗೆ ಅರ್ಘ್ಯಪ್ರದಾನ ಮಾಡಲು ಅವಕಾಶವಿದೆ.

ಮರುದಿನ 19-08-2022 ರಂದು ಪ್ರಾತಃಕಾಲ ನಾಮಸಂಕೀರ್ತನೆ ಶ್ರೀದೇವರಿಗೆ ಪಂಚಾಮೃತಾಭಿಷೇಕ, ಬೆಳಗ್ಗಿನ ಪೂಜೆ ನಂತರ ಶ್ರೀಕೃಷ್ಣನಿಗೆ ಪ್ರಿಯವಾದ ಲಕ್ಷತುಳಸೀ ಅರ್ಚನೆ ಹಾಗೂ ವಿಶೇಷ ಮಹಾಪೂಜೆ, ನಡೆಯಲಿದೆ. ಲಕ್ಷತುಳಸೀ ಅರ್ಚನೆಗೆ ಅಗತ್ಯವಿರುವ ತುಳಸಿಯನ್ನು 18 ರ ಪ್ರಾತಃಕಾಲಕ್ಕೆ ಮೊದಲಾಗಿ ದೇವಳಕ್ಕೆ ಅರ್ಪಿಸಬಹುದಾಗಿದೆ ಈ ಎಲ್ಲಾ ಕಾರ್ಯಕ್ರಮಕ್ಕೆ ಭಕ್ತಾದಿಗಳು ಬಂದು ಭಾಗವಹಿಸಿ ಶ್ರೀ ಗೋಪಾಲಕೃಷ್ಣ ದೇವರ ಅನುಗ್ರಹಕ್ಕೆ ಪಾತ್ರರಾಗಬೇಕಾಗಿ ವಿನಂತಿ.

ಈ ಪ್ರಯುಕ್ತ ಇಂದು ದೇವಸ್ಥಾನದಲ್ಲಿ ಶ್ರೀಕೃಷ್ಣಜನ್ಮಾಷ್ಟಮಿ,ಲಕ್ಷತುಳಸೀ ಅರ್ಚನೆ ಹಾಗೂ ಗಣೇಶ ಚತುರ್ಥಿಯಂದು ನಡೆಯಲಿರುವ 108 ನಾರೀಕೇಳ ಗಣಪತಿಹವನದ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಲಾಯಿತು. ಪ್ರಸಿದ್ಧ ದೈವಜ್ಙರಾದ ಶ್ರೀ ಸಿ.ವಿ ಪೊದುವಾಳ್, ದೇವಸ್ಥಾನದ ಆಡಳಿತ ಮೋಕ್ತೇಸರರಾದ ಡಾ.ಕೆ.ಸಿ ನಾೖಕ್‌, ಶಕ್ತಿ ಶಿಕ್ಷಣ ಸಂಸ್ಥೆಗಳ ಪ್ರಧಾನ ಸಲಹೆಗಾರರಾದ ಶ್ರೀ ರಮೇಶ್, ದೇವಸ್ಥಾನದ ಆಡಳಿತಾದಿಕಾರಿ ಶ್ರೀ ಆದೀಶ್.ಕೆ ಹಾಗೂ ಭಕ್ತಾದಿಗಳು ಈ ಸಂದರ್ಭ ಉಪಸ್ಥಿತರಿದ್ದರು.