ವಾರ್ಷಿಕ ಮಹೋತ್ಸವ

ಮಂಗಳೂರಿನ ಶಕ್ತಿನಗರದಲ್ಲಿರುವ ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ದಿನಾಂಕ 30-4-2022, ಶನಿವಾರದಂದು ತಂತ್ರಿವರ್ಯ ವೇದಮೂರ್ತಿ ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಅಸ್ರ ಇವರ ನೇತೃತ್ವದಲ್ಲಿ ಪ್ರತಿಷ್ಠಾ ವಾರ್ಷಿಕ ಮಹೋತ್ಸವ, ಲೋಕಕಲ್ಯಾಣಾರ್ಥವಾಗಿ ಏಕಾಹ ಭಜನೆ, ವಿಶೇಷ ಸೀಯಾಳಾಭಿಷೇಕ, ಮಹಾಗಣಪತಿ ಹವನ, ಚಂಡಿಕಾ ಹವನ, ರಂಗ ಪೂಜೆಯೊಂದಿಗೆ ಜರಗಲಿರುವುದು. ತಾರೀಕು 26-4-2022 ನೇ ಶುಕ್ರವಾರದಂದು ಪ್ರಾತಃ ಕಾಲ 6.12 ಮಂಗಳಾದೇವಿ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಶ್ರೀ ರಮಾನಂದ ಹೆಗ್ಡೆಯವರು ದೀಪ ಬೆಳಗಿಸುವುದರ ಮೂಲಕ ಏಕಾಹ ಭಜನೆಯನ್ನು ಉದ್ಘಾಟಿಸಲಿದ್ದಾರೆ. ಜಿಲ್ಲೆಯ ವಿವಿಧ ಭಜನಾತಂಡಗಳಿಂದ ಭಜನಾ ಸೇವೆ ನಡೆಯಲಿದೆ.

ತಾರೀಕು 30-04-2022 ರ ಪ್ರಾತಃಕಾಲ 6.12 ಕ್ಕೆ ಭಜನೆ ಪೂರ್ಣಗೊಳ್ಳಲಿದೆ. ನಂತರ ವಿಶೇಷ ಸೀಯಾಳಾಭಿಷೇಕ, ಗಣಪತಿ ಹವನ, ನವಕಾಭಿಷೇಕ ನಡೆಯಲಿದೆ. ಮಧ್ಯಾಹ್ನ 11.30 ಕ್ಕೆ ಚಂಡಿಕಾ ಹೋಮದ ಪೂರ್ಣಾಹುತಿಯ ನಂತರ ಮದ್ಯಾಹ್ನದ ಮಹಾಪೂಜೆ ನಡೆದು ಮಹಾ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ 4 ರಿಂದ ಆನಂದ ಭಜನೆ, 5.30 ಕ್ಕೆ ಯಕ್ಷಾಭಿನಯ ಬಳಗ ಮಂಗಳೂರು ಇವರ ವತಿಯಿಂದ ಬಾಲ ಕಲಾವಿದರಾದ ಕು| ಸ್ವಸ್ತಿಶ್ರೀ, ಮಾ| ಆರುಷ್, ಮಾ| ಆದ್ವಿಕ್ ಅವರಿಂದ ಬಡಗುತಿಟ್ಟಿನ ಯಕ್ಷಗಾನ ನೃತ್ಯ ’ಶ್ರೀ ಕೃಷ್ಣ ಲೀಲಾಮೃತಂ’ ಪಸ್ತುತಗೊಳ್ಳಲಿದೆ. ರಾತ್ರಿ 8 ಕ್ಕೆ ಮಹಾಪೂಜೆ, ಶ್ರೀ ದೇವರಿಗೆ ರಂಗ ಪೂಜೆ ಜರುಗಿ ಪ್ರಸಾದ ವಿತರಣೆ ನಡೆಯಲಿದೆ.