ಎಪ್ರಿಲ್ 20 ರಿಂದ 25 ರವರೆಗೆ ಅಷ್ಟಬಂಧ ಬ್ರಹ್ಮಕಲಶ – ಆಮಂತ್ರಣ ಪತ್ರಿಕೆ ಬಿಡುಗಡೆ

ಶಕ್ತಿನಗರ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಅಷ್ಟಬಂಧ ಬ್ರಹ್ಮಕಲಶ ಇದೇ ಬರುವ ಎಪ್ರಿಲ್ 20 ರಿಂದ 25 ರವರೆಗೆ ನಡೆಸುವುದಾಗಿ ನಿಶ್ಚಯಿಸಿದ್ದು ಈ ಪ್ರಯುಕ್ತ ವಿವಿಧ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಈ ಎಲ್ಲಾ ಕಾರ್ಯಕ್ರಮಗಳಿಗೆ ನಾಡಿನ ಪ್ರಮುಖ ಮಠಗಳ ಸ್ವಾಮೀಜಿಗಳು, ರಾಜ್ಯದ ಮುಖ್ಯಮಂತ್ರಿಗಳು, ಸಚಿವರು, ಗಣ್ಯರು, ಅತಿಥಿ ಅಭ್ಯಾಗತರು ಪಾಲ್ಗೊಳಲಿದ್ದಾರೆ, ದಿನಾಂಕ 18-4-2021 ದಂದು ಬ್ರಹ್ಮಕಲಶದ ಅಂಗವಾಗಿ ಹೊರೆಕಾಣಿಕೆ ಮೆರವಣಿಗೆ ಬಂಟ್ಸ್ ಹಾಸ್ಟೆಲ್ ಮೈದಾನದಿಂದ ಹೊರಟು ಶ್ರೀ ಕ್ಷೇತ್ರವನ್ನು ತಲುಪಲಿದೆ ನಂತರ ಸಭಾ ಕಾರ್ಯಕ್ರಮ ನಡೆಯಲಿದೆ. ದಿನಾಂಕ 20-4-2021 ರಂದು ತಂತ್ರಿಗಳ ಆಗಮನ ಸ್ವಾಗತದ ನಂತರ ಬ್ರಹ್ಮಕಲಶೋತ್ಸವ ವಿದ್ಯುಕ್ತವಾಗಿ ಉದ್ಘಾಟನೆಯಾಗಲಿದೆ ಭಾರತ ಸರ್ಕಾರದ ರಾಸಾಯಿನಿಕ ಮತ್ತು ರಸಗೊಬ್ಬರ ಇಲಾಖೆಯ ಮಾನ್ಯ ಸಚಿವರಾದ ಶ್ರೀ ಡಿ.ವಿ ಸದಾನಂದ ಗೌಡರು ಉದ್ಘಾಟನೆ ಮಾಡಲಿದ್ದು, ಸಚಿವರಾದ ಶ್ರೀ ಎಸ್. ಅಂಗಾರ ಅನೇಕ ಗಣ್ಯರು ಭಾಗವಹಿಸಲಿದ್ದಾರೆ ಅಂದು ಸಂಜೆ 5.30  ರಿಂದ ಶಕ್ತಿ ರೆಸಿಡೆನ್ಸಿ ಶಾಲೆ ಹಾಗೂ ಪ.ಪೂ ಕಾಲೇಜಿನ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿದೆ 21 ರಂದು ವಿವಿಧ ದಾರ್ಮಿಕ ವಿಧಿ ವಿಧಾನಗಳೊಂದಿಗೆ ಮಹಾಪೂಜೆ ನೆರವೇರಲಿದೆ. ಸಂಜೆ ಹರಿಕಥಾ ಸತ್ಸಂಗ ಹಾಗೂ ಸನಾತನ ನಾಟ್ಯಾಲಯ ಇವರಿಂದ ಸನಾತನ ನೃತ್ಯಾಂಜಲಿ ಪ್ರಸ್ತುತಗೊಳ್ಳಲಿದೆ. ದಿನಾಂಕ 22 ರಂದು ಮಹಾಪೂಜೆ ಹೋಮಗಳು ನೆರವರಲಿದ್ದು ಸಂಜೆ ಸೌರಭ ನೃತ್ಯ ಕಲಾ ಪರಿಷತ್(ರಿ) ಮಂಗಳೂರು ಇವರಿಂದ ಶ್ರೀ ಕೃಷ್ಣ ನೃತ್ಯ ಮಾಧುರ್ಯಂ ಎಂಬ ನೃತ್ಯ ಕಾರ್ಯಕ್ರಮವಿದೆ.

ಅಂದಿನ ಸಭಾಕಾರ್ಯಕ್ರಮದಲ್ಲಿ ಸಂಸದರಾದ ನಳಿನ್ ಕುಮಾರ್ ಕಟೀಲು ಹಾಗೂ ಅನೇಕ ಗಣ್ಯರು ಬಾಗವಹಿಸಲಿದ್ದು ಸಭೆಯ ಅಧ್ಯಕ್ಷತೆಯನ್ನು ಕರ್ಣಾಟಕ ಬ್ಯಾಂಕಿನ ಆಡಳಿತ ನಿರ್ದೇಶಕರಾದ ಶ್ರೀ ಮಹಬಲೇಶ್ವರ ಎಮ್.ಎಸ್ ವಹಿಸಲಿದ್ದಾರೆ. ತುಳುನಾಡ ತುಡರ್ (ರಿ) ಮಂಗಳೂರು ಇವರಿಂದ ಮಾರಿಯಮ್ಮ ತುಳು ಜಾನಪದ ನಾಟಕ ಪ್ರದರ್ಶನಗೊಳ್ಳಲಿದೆ. 23-4-2021 ರಂದು ಕ್ಷೇತ್ರದಲ್ಲಿ ವಿಶೇಷ ಚಂಡಿಕಾ ಹವನ ನಡೆಯಲಿದೆ. ಸಾಕ್ಸೋಫೋನ್ ವಾದನ ಮತ್ತು ಭರತ ನಾಟ್ಯಗಳಲ್ಲದೆ ಅಂದು ರಾತ್ರಿ ಶ್ರೀ ಕೃಷ್ಣ ಲೀಲಾಮೃತಂ ಯಕ್ಷಗಾನ ಬಯಲಾಟವೂ ಜರುಗಲಿದೆ. 24-4-2021 ರಂದು ಬ್ರಹ್ಮಕಲಶದ ಸ್ಥಾಪನೆ ಇತ್ಯಾದಿ ವೈದಿಕ ಕಾರ್ಯಕ್ರಮಗಳಿದ್ದು ಸಂಜೆ ರಾಗ ದ್ವನಿ ತಂಡದಿಂದ ಗೀತ-ಗಾನ ಲಹರಿ ಮೂಡಿಬರಲಿದೆ. ಘನ ರಾಜ್ಯ ಸರ್ಕಾರದ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಬಿ.ಎಸ್ ಯಡಿಯೂರಪ್ಪ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದು ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ, ಜಿಲ್ಲೆಯ ಶಾಸಕರು, ಧಾರ್ಮಿಕ ಮುಖಂಡರು, ಅಲ್ಲದೇ ಅನೇಕ ಗಣ್ಯರು ಪಾಲ್ಗೊಳ್ಳಲಿದ್ಧಾರೆ ನಂತರ ಅಂಕುಶ್ ಎನ್ ನಾಯಕ್ ಇವರಿಂದ ಸಿತಾರ್ ವಾದನ ನಡೆಯಲಿದೆ. 25-4-2021 ರ ಪೂರ್ವಾಹ್ನ 3.48 ರಿಂದ 4.21 ರ ಮಧ್ಯೆ ಒದಗುವ ಮೀನ ಲಗ್ನ ಸುಮುಹೂರ್ತದಲ್ಲಿ ಅಷ್ಟಬಂಧ ಲೇಪನ ಸಹಿತ ಬ್ರಹ್ಮಕಲಶಾಭಿಷೇಕ ನೆರವೇರಲಿದೆ, ಮಹಾಪೂಜೆಯ ಬಳಿಕ ಮಹಾ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ ಸಂಗೀತ ನೃತ್ಯ ವೈಭವ ನಡೆಯಲಿದ್ದು ಸಮಾರೋಪ ಸಮಾರಂಭದೊಂದಿಗೆ ಬ್ರಹ್ಮಕಲಶೋತ್ಸವ ಸಂಪನ್ನಗೊಳ್ಳಲಿದೆ. ತಾರೀಕು 29-4-2021 ರಂದು ವಾರ್ಷಿಕ ಮಹೋತ್ಸವ ವಿವಿಧ ಧಾರ್ಮಿಕಗಳೊಂದಿಗೆ ನೆರವೇರಲಿದೆ.

ಆಮಂತ್ರಣ ಪತ್ರಿಕೆಯನ್ನು ಅಷ್ಟಬಂಧ ಬ್ರಹ್ಮಕಲಶೋತ್ಸವ ಸಮಿತಿಯ ಗೌರವಾಧ್ಯಕ್ಷರು ಸಂಸದರೂ ಆದ ಶ್ರೀ ನಳಿನ್ ಕುಮಾರ್ ಕಟೀಲ್ ಬಿಡುಗಡೆಗೊಳಿಸಿ, ಬ್ರಹ್ಮಕಲಶೋತ್ಸವ ದೇವರ ಸಂಕಲ್ಪ ಅದಕ್ಕೆ ಭಕ್ತರಿಗೆ ಆಮಂತ್ರಣ ಕೊಟ್ಟು ಕರೆಯುವ ಅವಶ್ಯಕತೆಯಿಲ್ಲ ದೈವಸಂಕಲ್ಪವಿದ್ದರೆ ದೇವರೇ ಕರೆಸಿಕೊಳ್ಳುತ್ತಾನೆ ಎಂದು ಅಭಿಪ್ರಾಯ ತಿಳಿಸಿದರು, ಅಧ್ಯಕ್ಷರಾದ ಶ್ರೀ ಮೊನಪ್ಪ ಭಂಡಾರಿ, ಆಡಳಿತ ಮೊಕ್ತೇಸರರಾದ ಡಾ. ಕೆ. ಸಿ. ನಾೖಕ್ ಕಾರ್ಯದರ್ಶಿಗಳಾದ ಹೆಚ್.ಕೆ ಪುರುಷೋತ್ತಮ, ಕೋಶಾಧ್ಯಕ್ಷರಾದ ಕೃಷ್ಣ ಪ್ರಸಾದ್ ಮಡ್ತಿಲ, ನಗರಪಾಲಿಕೆ ಸದಸ್ಯರಾದ ಸುಧೀರ್ ಶೆಟ್ಟಿ ಕಣ್ಣೂರು, ಮಹಿಳಾ ಸಮಿತಿ ಅಧ್ಯಕ್ಷರು ಮಹಾನಗರ ಪಾಲಿಕೆ ಸದಸ್ಯರಾದ ಶ್ರೀಮತಿ ಶಕೀಲಾ ಕಾವ, ಉಪಾಧ್ಯಕ್ಷರಾದ ಶ್ರೀಮತಿ ವನಿತಾ ಪ್ರಸಾದ್, ಮೊಕ್ತೇಸರರಾದ ಶ್ರೀಮತಿ ಸಗುಣಾ ಸಿ. ನಾೖಕ್ ಉಪಸ್ಥಿತರಿದ್ದರು.