ತುಳಸೀ ಪೂಜೆ, ತುಳಸೀ ನಾಮಸಂಕೀರ್ತನೆ ಸಮಾಪನ

ಶೃದ್ಧಾ ಭಕ್ತಿಯಿಂದ ನಡೆಸಿದ ದೇವತಾ ಸೇವೆಯಿಂದ ಅತಿಶಯವಾದ ಫಲವಿದೆ – ಪ್ರೊ. ಎಮ್. ಬಿ. ಪುರಾಣಿಕ್

ಕಾರ್ತಿಕ ಮಾಸದಲ್ಲಿ ಮಾಡುವ ತುಳಸೀ ಪೂಜೆಯಿಂದ ವಿಶೇಷವಾದ ಫಲವಿದೆ. ತುಳಸಿಯಲ್ಲಿ ಲಕ್ಷ್ಮೀದೇವಿಯು ನೆಲೆಸಿದ್ದು ಉತ್ಥಾನ ದ್ವಾದಶಿಯಂದು ತುಳಸೀ ದಾಮೋದರ ಕಲ್ಯಾಣ ಸಹಿತ ಮಾಡಿದ ಸಂಕೀರ್ತನೆ, ಪೂಜೆಯಿಂದ ಶ್ರೀಲಕ್ಷ್ಮೀ ನಾರಾಯಣರು ಸಂತುಷ್ಟರಾಗಲಿ, ಭಕ್ತಜನರ ಸಂಕಷ್ಟ ಪರಿಹಾರವಾಗಲಿ, ರಾಷ್ಟ್ರಕ್ಕೆ ಬಂದಂತಹ ಸಾಂಕ್ರಾಮಿಕರೋಗ ಸಂಪೂರ್ಣವಾಗಿ ನಿವಾರಣೆಯಾಗಲಿ, ಲೋಕಕ್ಕೆ ಕಲ್ಯಾಣವಾಗಲಿ. ಎಂದು ವಿಶ್ವ ಹಿಂದೂ ಪರಿಷತ್‌ನ ಪ್ರೊ. ಎಮ್. ಬಿ. ಪುರಾಣಿಕ್ ನುಡಿದರು.

ಅವರು, ಶ್ರೀ ಕ್ಷೇತ್ರದಲ್ಲಿ ದೀಪಾವಳೀ ಪಾಡ್ಯದಿಂದ ಉತ್ಥಾನ ದ್ವಾದಶಿಯವರೆಗೆ ನಡೆದ ತುಳಸೀ ನಾಮ ಸಂಕಿರ್ತನೆಯ ಸಮಾಪನ ಹಾಗೂ ತುಳಸೀ ಪೂಜೆ, ತುಳಸೀ ದಾಮೋದರ ಕಲ್ಯಾಣದ ಸಂದರ್ಭದಲ್ಲಿ ವಿಶೇಷವಾಗಿ ಪ್ರಾರ್ಥಿಸುತ್ತಾ ನುಡಿದರು.

ಈ ಸಂದರ್ಭದಲ್ಲಿ ಆಡಳಿತ ಮೊಕ್ತೇಸರರಾದ ಡಾ. ಕೆ. ಸಿ. ನಾಕ್, ಶ್ರೀಮತಿ ಸುನಂದಾ ಪುರಾಣಿಕ್, ಸಮೀರ್ ಪುರಾಣಿಕ್, ಶಕ್ತಿ ವಿದ್ಯಾ ಸಂಸ್ಥೆಯ ರಮೇಶ್ ಕೆ., ಶಕ್ತಿನಗರದ ವಿಶ್ವನಾಥ ಭಟ್, ರಮಾದೇವಿ ಮಮತಾ ಮೊಹನದಾಸ್ ಮತ್ತಿತರರು ಉಪಸ್ಥಿತರಿದ್ದರು.